ಬ್ರಿಯನ್‍ಖನ್, ಚಾಲ್ರ್ಸ್ - ಜೂಲಿಯನ್
	1783-1864. ಫ್ರಾನ್ಸಿನ ಗಣಿತವಿದ. ಜನನ 19-12-1783. ಮರಣ 29-4-1964. ಜ್ಯಾಮಿತಿಯಲ್ಲಿ ಬರುವ ಒಂದು ಪ್ರಮೇಯದ ಶೋಧಕನಾಗಿ ಪ್ರಸಿದ್ಧನಾಗಿದ್ದಾನೆ.

	ಬ್ಲೇಸ್ ಪಾಸ್ಕಲ್ (1623-61) ಎಂಬಾತ ಶೋಧಿಸಿದ್ದ ವಿಸ್ಮಯಕಾರಿ ಷಷ್ಠ ಭುಜದ ಪ್ರಮೇಯದ ನಿರೂಪಣಿ: ಷಷ್ಠ. ಭುಜದ ಎಲ್ಲ ಶೃಂಗಗಳೂ ವೃತ್ತ ಪರಿಧಿಯ ಮೇಲೆದ್ದು ಎದುರು ಬದಿರು ಭುಜಗಳು ಸಂಧಿಸಿದರೆ ಈ ಸಂಧಿ ಬಿಂದುಗಳು ಏಕರೇಖಸ್ಥವಾಗಿವೆ. ಈ ಪ್ರಮೇಯದಿಂದ ಸ್ಫೂರ್ತಿ ಪಡೆದ ಬ್ರಿಯನ್ ಖನ್ ಇದಕ್ಕೆ ದ್ವೈತ ತತ್ತ್ವ (ಪ್ರಿನ್ಸಿಪಲ್ ಆಫ್ ಡ್ಯೂಯಲ್‍ಟಿ) ಅನ್ವಯಿಸಿ ಹೊಸತೊಂದು ಪ್ರಮೇಯ ಪಡೆದ. ಇದೇ ಬ್ರಿಯನ್‍ಖನ್ನನ ಪ್ರಮೇಯ: ಶಂಕುಜವನ್ನು (ಕಾನಿಕ್) ಪರಿಗತಿಸುವ (ಸರ್ಕಮ್ ಸ್ಕ್ರೈಬ್) ಷಷ್ಠಭುಜದ ಎದುರುಬದಿರು ಶೃಂಗಗಳನ್ನು ಜೋಡಿಸುವ ಸರಳರೇಖೆಗಳು ಏಕಬಿಂದುಸ್ಥವಾಗಿವೆ. (ಕನ್‍ಕರೆಂಟ್). ಈ ತೆರನಾಗಿ ದ್ವೈತತತ್ತ್ವಕ್ಕೆ ಜ್ಯಾಮಿತಿಯಲ್ಲಿ ಒಂದು ಸ್ಥಾನ ದೊರಕಿಸಿಕೊಟ್ಟದ್ದರಿಂದ ಬ್ರಿಯನ್‍ಖನ್ನನ ಹೆಸರು ಶಾಶ್ವತವಾಗಿದೆ.										(ಬಿ.ಬಿ.ಬಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ